ಕುಸುಮಾಕರ ದೇವರಗೆಣ್ಣೂರು ( ೧೯೩೦-೨೦೧೨) ಕಾವ್ಯನಾಮದಲ್ಲಿ ಕನ್ನಡ ಸಾಹಿತ್ಯಕೃಷಿ ಮಾಡುತ್ತಿರುವ ವಸಂತ ಅನಂತ ದಿವಾಣಜಿ ಇವರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ದೇವರಗೆಣ್ಣೂರ ಗ್ರಾಮದಲ್ಲಿ ಜನಿಸಿದರು. ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ , ಪುಣೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು. ೧೯೫೬ರಲ್ಲಿ ಸೊಲ್ಲಾಪುರದ ದಯಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಭಾಷೆಯ ಪ್ರಾಧ್ಯಾಪಕರಾಗಿ ೩೫ ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು. ಇವರು ೨೦೧೨ರಲ್ಲಿ ತೀರಿಕೊಂಡರು. == ಕಾದಂಬರಿಗಳು == ಕುಸುಮಾಕರ ದೇವರಗೆಣ್ಣೂರು ಇವರು ಅನೇಕ ಕಾದಂಬರಿಗಳನ್ನು ರಚಿಸಿದ್ದಾರೆ. ಮುಗಿಯದ ಕಥೆ,(೧೯೬೫) ನಾಲ್ಕನೆಯ ಆಯಾಮ,(೧೯೬೬) ನಿರಿಂದ್ರಿಯ,(೧೯೯೩) ಪರಿಘ (೧೯೯೫) ಬಯಲು-ಬಸಿರು,(೨೦೦೫) == ಕವನ ಸಂಕಲನಗಳು == ಸ್ವಪ್ನನೌಕೆ == ಸಾಹಿತ್ಯ ವಿಮರ್ಶೆ == ಗಾಳಿ ಹೆಜ್ಜೆ ಹಿಡಿದ ಸುಗಂಧ, ನಕ್ಷೆಗೆ ಎಟುಕದ ಕಡಲು ಕ್ರಾಂತ ದರ್ಶನ == ಅನುವಾದ == ಬಯಲು-ಬಸಿರು,( ಇಂಗ್ಲೀಷ್ ಮತ್ತು ಮರಾಠಿಗೆ‌) ದುರ್ದಮ್ಯ,(ಕನ್ನಡ ಭಾಷೆಗೆ ಮರಾಠಿಯಿಂದ ) == ಅಭಿನಂದನಾ ಗ್ರಂಥ == ಅವಗಾಹ. == ಪಿಎಚ್ ಡಿ ಪ್ರಬಂಧ == ಪುರಂದರದಾಸರು ಜೀವನ ಹಾಗೂ ಕೃತಿಗಳು : ಒಂದು ಅಧ್ಯಯನ - ಎಂಬ ಪ್ರೌಢ ಪ್ರಬಂಧವನ್ನು ೧೯೬೬ ರಲ್ಲಿ ರಂ.ಶ್ರೀ.ಮುಗಳಿಯವರ ಮಾರ್ಗ ದರ್ಶನದಲ್ಲಿ ಪುಣೆ ವಿಶ್ವವಿದ್ಯಾಲಯದಲ್ಲಿ ಮಂಡಿಸಿ ಪಿಎಚ್.ಡಿ ಪದವಿಯನ್ನು ಪಡೆದರು. ಈ ಕೃತಿಯನ್ನು ಪ್ರಸಾದ ಯೋಗ ಎಂಬ ಹೆಸರಿನಿಂದ ೧೯೭೨ ರಿಂದ ಮಂತ್ರಾಲಯದ ರಾಘವೇಂದ್ರ ಮಠದಿಂದ ಹಲವು ಮರು ಮುದ್ರಣಗೊಂಡಿದೆ. == ಪ್ರಶಸ್ತಿ == ೨೦೦೬ರಲ್ಲಿ ಸತ್ಯಕಾಮ ಪ್ರಶಸ್ತಿ ಪ್ರದಾನವಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ೨೦೦೩ ಮುಂಬೈನ ಗುರುನಾರಾಯಣ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು. == ಉಲ್ಲೇಖಗಳು ==